ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಂದ ಬೀದಿನಾಟಕ ಪ್ರದರ್ಶನ


ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಂದ ಬೀದಿನಾಟಕ ಪ್ರದರ್ಶನ

ಅಂತರಾಷ್ರೀಯ ವiಹಿಳಾ ದಿನಾಚರಣೆಯ ಅಂಗವಾಗಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರದ ವಿದ್ಯಾರ್ಥಿಗಳು ದಿನಾಂಕ 8, ಮಾರ್ಚ 2018ನೇ ಗುರುವಾರ ಉಡುಪಿಯ ಡಾ. ಈ. ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಆವರಣದಲ್ಲಿ ಮಹಿಳಾ ದೌರ್ಜನ್ಯ ಮತ್ತು ಮಹಿಳಾ ಹಕ್ಕುಗಳ ಕುರಿತಾದ ‘ಹೆಣ್ಣು ಜಗದ ಕಣ್ಣು’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು.

ಆ ಸಂರ್ದಭದಲ್ಲಿ ಡಾ. ಈ. ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಇದರ ಪ್ರಾಂಶುಪಾಲರಾದ ಶ್ರೀ ಭಾಸ್ಕರ್ ರೈ ಮತ್ತು ಉಡುಪಿ ನಗರ ಜೇಸಿಐನ ಅಧ್ಯಕ್ಷರಾದ ಶ್ರೀ ರಫೀಕ್‍ರವರು ಉಪಸ್ಥಿತರಿದ್ದರು.


News published on: 10-03-2018